ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆಕ್ಯಾಂಪ್ ಬಳಿ ಕಣ್ಣನ್ನೂರಿನಿಂದ ಬೆಂಗಳೂರಿಗೆ ಹೋಗುತಿದ್ದ ಕಲ್ಪಕ ಬಸ್ ಸಾಕಾನೆಯೊಂದಕ್ಕೆ ಡಿಕ್ಕಿ ಹೊಡೆದ ಕಾರಣ ಆನೆಯ ಸೊಂಟ ಮುರಿದಿದೆ.
ಮತ್ತಿಗೋಡು ಆನೆಕ್ಯಾಂಪ್ ನಲ್ಲಿರುವ ನಲವತೈದು ವರ್ಷ ಪ್ರಾಯದ ಆನೆ ರಂಗನನ್ನು ಎಂದಿನಂತೆ ರಾತ್ರೆ ತಿರುಗಾಡಲು ಬಿಡಲಾಗಿತ್ತು. ರಾತ್ರೆ ಅಂದಾಜು 2ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಆನೆಕ್ಯಾಂಪ್ ನ ವೈದ್ಯ ಡಾ ಮುಜೀಬ್ ಮತ್ತು ಆನೆ ಮಾವುತರು ಆನೆಗಳ ಸಹಕಾರದಿಂದ ಶುಶ್ರೂಷೆ ನಡೆಸುತಿದ್ದಾರೆ. ಈ ಆನೆಯನ್ಬು ಬೆಂಗಳೂರಿನ ಬಳಿಯಲ್ಲಿ 3 ವರ್ಷಗಳ ಹಿಂದೆ ಸೆರೆಹಿಡಿದು ಪಳಗಿಸಲಾಗಿತ್ತು. ರೌಡಿ ರಂಗ ಎಂದು ಈ ಆನೆ ಹಿಂದೆ ಪ್ರಖ್ಯಾತಿ ಪಡೆದಿತ್ತು ಎಂದು ಕಾವಡಿ ಒಬ್ಬರು ತಿಳಿಸಿದ್ದಾರೆ. ಎರಡು ದಿನ ಕಳೆದಿದ್ದರೆ ಈ ಆನೆ ಮೈಸೂರು ದಸರಕ್ಜೆ ಹೋಗುತಿತ್ತು ಹೀಗಾಯಿತಲ್ಲ ಎಂದು ಶುಶ್ರೂಷೆ ಮಾಡುತಿದ್ದ ಕಾವಡಿಯೊಬ್ಬರು ಬೇಸರ ವ್ಯಕ್ತ ಪಡಿಸಿದರು.