ಕುಶಾಲನಗರ 

ಸರಕಾರಿ ಪಿಯು ಕಾಲೇಜಿನ ಪ್ರೌಢಶಾಲೆಯಲ್ಲಿ ಶಿಕ್ಷ ಣ ಪಡೆದು ಸೈನಿಕನಾಗಿ ಸೇನೆಗೆ ಸೇರಿ ಹುತಾತ್ಮರಾದ ಯೋಧರೊಬ್ಬರ ಸ್ಮರಣಾರ್ಥ ಕಾಲೇಜು ಆವರಣದಲ್ಲಿ ನಿರ್ಮಿಸಿದ್ದ ಸ್ಮಾರಕವನ್ನು ಅನಾವರಣಮಾಡಲಾಯಿತು. 

ಹಾರಂಗಿಯ ಹುಲುಗುಂದ ಗ್ರಾಮದ ನಿವಾಸಿ ಸ್ವಾತಂತ್ರ ಹೋರಾಟಗಾರ ದಿ.ಕೆ.ಪದ್ಮನಾಭ ರಾವ್‌ ಹಾಗೂ ಕಮಲಮ್ಮ ದಂಪತಿ ಪುತ್ರ ಯೋಧ ದಿ.ಕೆ.ರಾಘವೇಂದ್ರ ಅವರ ದೇಶ ಸೇವೆಯ ನೆನಪಿಗಾಗಿ ಕೇಂದ್ರ ಸರಕಾರ ಕುಶಾಲನಗರದಲ್ಲಿ ಸ್ಮಾರಕ ನಿರ್ಮಾಣ ಮಾಡಿದೆ. 

ಸರಕಾರಿ ಪಿಯು ಕಾಲೇಜಿನ ಪ್ರೌಢಶಾಲೆಯಲ್ಲಿ 1980ರಿಂದ 83ರ ವರೆಗೆ ವ್ಯಾಸಂಗ ಮಾಡಿ ಪ್ರೌಢಶಿಕ್ಷ ಣ ಮುಗಿದ ನಂತರ ರಾಘವೇಂದ್ರ ಅವರು 1988ರಲ್ಲಿ ಕೇಂದ್ರ ಕೈಗಾರಿಕಾ ರಕ್ಷಣಾ ಪಡೆಗೆ (ಸಿಐಎಸ್‌ಎಫ್‌) ಸೇರ್ಪಡೆಗೊಂಡು ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.