*ಸೂರ್ಲಬ್ಬಿ – ಗರ್ವಾಲೆ ಬಾಗದಲ್ಲಿ ಮೂರು ದಿನಗಳಿದ ಬಿಡದೇ ಸುರಿಯುತ್ತಿರುವ ಧಾರಕಾರ ಮಳೆ*

*ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಗ್ರಾಮೀಣ ಪ್ರದೇಶಗಳು ತತ್ತರ.*

*ಸೂರ್ಲಬ್ಬಿ, ಗರ್ವಾಲೆ, ಶಿರಂಗಳ್ಳಿ, ಕುಂಬಾರಗಡಿಗೆ, ಕಿಕ್ಕರಹಳ್ಳಿ, ಮಂಕ್ಯ, ಹಮ್ಮೀಯಾಲ, ಮುಟ್ಲು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ,ಕೆರೆ,ತೊರೆಗಳು ತುಂಬಿ ಹರಿಯುತ್ತಿದ್ದು,ಹೊಲ ಗದ್ದೆಗಳು ನೀರಿನಲ್ಲಿ ಮುಳುಗಡೆಯಾಗಿದೆ. ಮನೆಯ ಸುತ್ತಮುತ್ತ ಇರುವ ಕೊಂಬೆಗಳು,ಬರೆಗಳು ಮನೆಗೆ ಬಿದ್ದು ಹಾನಿಯಾಗಿದ್ದು,ಊರಿನ ಸುತ್ತಮುತ್ತ ಸ್ಥಳಗಳಿಗೆ ತೆರಳುವ ಮಾರ್ಗದಲ್ಲೂ ಮರಗಳು ಬಿದ್ದಿವೆ, ಸೂರ್ಲಬ್ಬಿ ಮುಖ್ಯರಸ್ತೆಯ ಗರ್ವಾಲೆ – ಶಿರಂಗಳ್ಳಿ ಮದ್ಯೆ ಇರುವ ಹಾದಿಗಲ್ಲು ಹೊಳೆಯ ಹತ್ತಿರ ರಸ್ತೆಗೆ ಭಾರೀ ಗಾತ್ರದ ಬರೆ ಕುಸಿದಿದ್ದು ಈ ಭಾಗದಲ್ಲಿ ಸಾರಿಗೆ ಮತ್ತು ವಿದ್ಯುತ್ ಸಂಪರ್ಕ ಇಲ್ಲಾದಂತಾಗಿದೆ ಕೂಡಲೇ ಜಿಲ್ಲಾಡಳಿತ ಸ್ಪಂದಿಸಬೇಕಾಗಿ ವಿನಂತಿ.*