ಇಂದು ಮಧ್ಯಾಹ್ನ ಗಿರಿಯಪ್ಪ ಮನೆ ಗದ್ದೆಯಲ್ಲಿ ತಮ್ಮಯ್ಯ ಎಂಬುವವರ ಲೈನ್ ಮನೆಯ ಸೀಬೆಕಾಯಿ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರವೀಣ್ ಎಂಬ ಬಾಲಕನ ಸಾವು ಆತ್ಮಹತ್ಯೆ ಆಗಿರದೇ ಉಯ್ಯಾಲೆ ಆತನನ್ನು ಬಲಿ ತೆಗೆದುಕೊಂಡಿರುವುದಾಗಿ ತಿರುವು ಪಡೆದುಕೊಂಡಿದೆ. ಮೃತನ ತಾಯಿ ಮಧ್ಯಾಹ್ನ ಅಂದಾಜು 3 ಗಂಟೆ ಸಮಯದಲ್ಲಿ ಮನೆಗೆ ತೆರಳಿ ನೋಡುವಾಗ ಪ್ರವೀಣನ ಮೃತದೇಹ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಂತರ ಪೊಲೀಸ್ ಠಾಣೆಯಲ್ಲಿ ಮತ್ತು ಆಸ್ಪತ್ರೆಯಲ್ಲಿ ಮಗ ನೇಣು ಬಿಗಿದುಕೊಂಡಿರಬಹುದು ಎಂದು ಸಂಶಯದಿಂದ ಹೇಳಿದ್ದರೆಂಬ ಮಾತಿನಿಂದಾಗಿ ಹಾಗೂ ಮೃತ ದೇಹವು ನೇಣು ಬಿಗಿದುಕೊಂಡು ಕೆಳಗೆ ಬಿದ್ದಂತೆ ಗೋಚರಿಸಿದ್ದರಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಹಜವಾಗಿಯೇ ಸುದ್ದಿ ಹರಡಿ ಸಾಮಾಜಿಕ ಜಾಲತಾಣಗಳಲ್ಲಿಯೂ ಇದೇ ರೀತಿ ಪ್ರಸಾರವಾಗಿತ್ತು ಅಲ್ಲದೇ ಸುದ್ದಿ ಮಾದ್ಯಮ ಹಾಗೂ ಪತ್ರಿಕೆಗಳಿಗೂ ಯಥಾವತ್ತಾಗಿ ವರದಿ ಹೋಗಿತ್ತು ಅಲ್ಲದೇ ಸಂಜೆಯವರೆಗೂ ಆತ್ಮಹತ್ಯೆ ಎಂದೇ ಪ್ರಕರಣ ಬಿಂಬಿತವಾಗಿತ್ತು. ಆದರೆ 4ನೇ ತರಗತಿ ವಿದ್ಯಾರ್ಥಿ ಆಹ್ಮಹತ್ಯೆ ಮಾಡಿಕೊಳ್ಳಬಹುದಾದ ನಿರ್ಧಾರಕ್ಕೆ ಬರಬಹುದೇ ? ಎಂಬ ಅನುಮಾನದಲ್ಲಿ ನಮ್ಮ ಸುದ್ಧಿಯ ಶೀರ್ಷೀಕೆಯಲ್ಲಿ *ಪ್ರಶ್ನಾರ್ಥಕ ಚಿಹ್ನೆ (?)*ಯನ್ನು ಬಳಸಲಾಗಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಬಾಲಕ ಆಟವಾಡಲೆಂದು ಸೀಬೆ ಮರಕ್ಕೆ ಕಟ್ಟಿದ್ದ ಉಯ್ಯಾಲೆಯ ಹಗ್ಗ ಆಕಸ್ಮಿಕವಾಗಿ ಕುತ್ತಿಗೆಯನ್ನು ಸುತ್ತಿಕೊಂಡು ಜೋಕಾಲಿ ಸಮೇತ ನೆಲಕ್ಕೆ ಬಿದ್ದ ಪರಿಣಾಮ ಕಗ್ಗಂಟನ್ನು ಬಿಡಿಸಿಕೊಳ್ಳಲಾಗದೇ ಜೀವತೆತ್ತಿದ್ದಾನೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಏನೇ ಆಗಲಿ ಬಾಲಕನ ಸಾವಿಗೆ ವಿಷಾದ ವ್ಯಕ್ತಪಡಿಸುತ್ತಾ ಈ ಸ್ಪಷ್ಟೀಕರಣವನ್ನು ನೀಡಿದ್ದೇವೆ. (ಕ್ಯೂಟ್ ಕೂರ್ಗ್ ಫ್ರೀಲ್ಯಾನ್ಸರ್ ನ್ಯೂಸ್)