ವಿದ್ಯಾರ್ಥಿನಿಯೊಬ್ಬಳು ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿರಾಜಪೇಟೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪುಷ್ಪಾ (17) ಮೃತ ವಿದ್ಯಾರ್ಥಿನಿ. ಈಕೆ ಅಮ್ಮತ್ತಿಯ ತನ್ನ ಮನೆಯಲ್ಲಿ ಸಮವಸ್ತ್ರದಲ್ಲಿಯೇ ನೇಣು ಬಿಗಿದುಕೊಂಡಿದ್ದಾಳೆ. ಇದಕ್ಕೂ ಮುನ್ನ ಆಕೆ ಡೆತ್‌ನೋಟ್‌ ಬರೆದಿಟ್ಟಿದ್ದಾಳೆ.

”ನನ್ನ ಸಾವಿಗೆ ಒಬ್ಬರು ಕಾರಣಕರ್ತರಾಗಿದ್ದು, ಅವರು ಯಾರು ಎಂದು ಹೇಳುವುದಿಲ್ಲ. ಅವರ ಮೇಲೆ ನಾನೇ ಸೇಡು ತೀರಿಸಿಕೊಳ್ಳುತ್ತೇನೆ. ನನ್ನ ಬದುಕಿನಲ್ಲಿ ನನಗೆ ಯಾವ ಸಂತೋಷವೂ ಉಳಿದಿಲ್ಲ. 17 ವರ್ಷದಲ್ಲಿ 17 ಜನ್ಮ ಹುಟ್ಟಿ ಬಂದಂತಾಗಿದೆ,” ಎಂದು ಬರೆದಿಟ್ಟಿದ್ದಾಳೆ.

ವಿರಾಜಪೇಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ದೂರು ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.