ಮಾನ್ಯ ಪೊಲೀಸ್ ಅಧಿಕಾರಿಗಳಲ್ಲಿ ಹೀಗೊಂದು ಮನವಿ*
ದಕ್ಷಿಣ ಕೊಡಗಿನ 2 ಪ್ರಮುಖ ಅಂತಾರಾಜ್ಯ ಹೆದ್ದಾರಿಗಳು ಭೂಕುಸಿತದಿಂದ ಹಾನಿಯಾಗಿದೆ.
1.ಪೊನ್ನಂಪೇಟೆ-ಶ್ರೀಮಂಗಲ-ಕುಟ್ಟ
ಈ ಮಾರ್ಗದ ಪೊಕಳೆತೋಡು ಬಳಿ ಭೂಕುಸಿತವಾಗಿ ರಸ್ತೆ ಕಡಿತವಾಗಿದೆ.ಸ್ವಲ್ಪ ಭಾಗ ಮಾತ್ರ ಉಳಿದಿದ್ದು,ಸ್ಥಳೀಯ ಮನೆಗಳಿಗೆ ತೆರಳಲು ಲಘು ವಾಹನ ತೆರಳಲು ಮಾತ್ರ ಅವಕಾಶವಿದೆ.
.ಪೊನ್ನಂಪೇಟೆ-ಕಾನೂರು-ಕುಟ್ಟ,ಇದು ಇನ್ನೊಂದು ಅಂತಾರಾಜ್ಯ ಹೆದ್ದಾರಿ.ಈ ಹೆದ್ದಾರಿ ನಡುವೆ ಕಾನೂರು ಸೇತುವೆ ಬಳಿ ರಸ್ತೆ-ಸೇತುವೆ ಬಳಿ,ಒಂದು ಬದಿ ಕುಸಿತವಾಗಿದೆ.
ಧಾರಾಕಾರ ಮಳೆ ಹಿನ್ನಲೆ ಈ ಎರಡು ಮಾರ್ಗ,ಭೂ ತೇವಾಂಶದಿಂದ ಕೂಡಿದೆ.ಇಂತ ಸಂದರ್ಭದಲ್ಲಿ ಭಾರಿ ವಾಹನಗಳನ್ನು ಈ ಮಾರ್ಗದಲ್ಲಿ ಲೋಕೋಪಯೋಗಿ ಅಧಿಕಾರಿಗಳು ನಿಷೇಧ ಮಾಡಿದ್ದಾರೆ.
ಆದರೇ, ಇಂದಿಗೂ ಈ ಮಾರ್ಗದಲ್ಲಿ ಭಾರಿ ಸರಕು ವಾಹನ ಸಾಗುತ್ತಿದೆ.ಹೀಗೆ ಮುಂದುವರೆದರೆ ಈ ಎರಡು ಹೆದ್ದಾರಿ,ಮತ್ತಷ್ಟು ಕುಸಿತವಾಗಿ,ರಸ್ತೆ ಸಂಪರ್ಕ ಕಡಿತವಾಗುವ ಆತಂಕವಿದೆ.
ಈ ಹಿನ್ನಲೆಯಲ್ಲಿ ಈ ರಸ್ತೆ ನಡುವೆ ಭಾರಿ ವಾಹನ ತಡೆಗೆ ಕಟ್ಟಿದ್ದ,ತಡೆಗೋಡೆಯನ್ನು ಕೆಡವಿ ಬಾರೀ ವಾಹನ ತೆರಳುತ್ತಿದೆ.
ಆದ್ದರಿಂದ,ಪೊನ್ನಂಪೇಟೆ,ಕುಟ್ಟ,ಶ್ರೀಮಂಗಲ, ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಭಾರಿ ವಾಹನ ಈ ಮಾರ್ಗದಲ್ಲಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

News Source – ಸುದ್ದಿಮನೆ*