ಮದ್ಯ ನಿಷೇಧ ತೀರ್ಮಾನಕ್ಕೆ ಬಾಳುಗೋಡು ಪೊಮ್ಮಕ್ಕಡ ಒಕ್ಕೂಟ ಮೆಚ್ಚುಗೆ*

ಮಡಿಕೇರಿ : ಅಮ್ಮತ್ತಿ ಕೊಡವ ಸಮಾಜವು ಇತ್ತೀಚಿನ ಸಭೆಯಲ್ಲಿ ಕೊಡವರ ವಿವಾಹದ ಪದ್ಧತಿಯ ಭಾಗವಾಗಿರುವ ಗಂಗಾ ಪೂಜೆಯ ಸಮಯದಲ್ಲಿ ಕೊಡವ ಸಮಾಜದ ಆವರಣದೊಳಗೆ ಮದ್ಯ ಬಳಕೆ ಮಾಡುವುದನ್ನು ನಿಷೇಧಿಸಿರುವುದು ಒಂದು ಐತಿಹಾಸಿಕ ತೀರ್ಮಾನ. ಇದರಿಂದ ಕೊಡವ ಜನಾಂಗವರಿಗೆ ಕೊಡವ ಪದ್ಧತಿಯ ಮಹತ್ವದ ಅರಿವಾಗುತ್ತದೆ ಎಂದು ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಕ್ಕಡ ಒಕ್ಕೂಟ ಮೆಚ್ಚುಗೆ ವ್ಯಕ್ತಪಡಿಸಿದೆ.
ಕೊಡವ ಜನಾಂಗಕ್ಕೆ ತನ್ನದೇ ಆದ ಐತಿಹ್ಯ ಹಾಗೂ ಮಹತ್ವವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನೀಕತೆಯ ಸೋಗಿಗೆ ಮಾರು ಹೋಗುವ ನೆಪದಲ್ಲಿ ಜನಾಂಗದವರು ನಮ್ಮ ಮೂಲ ಸಂಸ್ಕøತಿಯನ್ನು ಮರೆಯುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ. ಇಂಥ ಸಂದರ್ಭದಲ್ಲಿ ಅಮ್ಮತ್ತಿ ಕೊಡವ ಸಮಾಜದ ತೆಗೆದುಕೊಂಡಿರುವ ತೀರ್ಮಾನ ಹೆಚ್ಚು ಮಹತ್ವ ಪಡೆಯುತ್ತದೆ ಎಂದು ಒಕ್ಕೂಟದ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ ಹಾಗೂ ಆಡಳಿತ, ಕಾರ್ಯಕಾರಿ ಮಂಡಳಿ ಸದಸ್ಯರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಲ್ಲಾ ಕೊಡವ ಸಮಾಜಗಳು ಹಾಗೂ ಕೊಡವರು ಆದಷ್ಟು ನಮ್ಮ ಹಿಂದಿನ ಪದ್ಧತಿಯಂತೆ ವಿವಾಹ, ಹಬ್ಬ, ಉಡುಗೆ-ತೊಡುಗೆ, ಆಚಾರ ವಿಚಾರವನ್ನು ಪಾಲಿಸಿಕೊಂಡು ಬರಬೇಕು. ತಮ್ಮ ಮಕ್ಕಳಿಗೂ ಸಂಸ್ಕøತಿಯ ಮಹತ್ವದ ಬಗ್ಗೆ ತಿಳಿ ಹೇಳಿ ಶ್ರೀಮಂತ ಸಂಸ್ಕøತಿಯ ಉಳಿವು ಮತ್ತು ಬೆಳವಣಿಗೆಗೆ ನೆರವಾಗಬೇಕೆಂದು ಮನವಿ ಮಾಡಿದ್ದಾ