*‘ಮಕ್ಕಡ ಮನಸ್ಸ್”* ಕೊಡವ ಚಲನಚಿತ್ರ ಚಿತ್ರೀಕರಣ

ಕೊಡವ ಭಾಷೆಯ ಮೊದಲ ಮಕ್ಕಳ ಚಲನಚಿತ್ರ ‘ಮಕ್ಕಡ ಮನಸ್ಸ್” ಚಿತ್ರೀಕರಣ ಕೊಡಗಿನಲ್ಲಿ ಆರಂಭವಾಗಿದೆ. ಚಿತ್ರತಂಡ ವಿರಾಜಪೇಟೆಯ ಗಣಪತಿ ದೇವಾಲಯಲ್ಲಿ ಪೂಜೆಸಲ್ಲಿಸಿ ವಿರಾಜಪೇಟೆಯ ಸೆಂಟೆನ್ಸ್ ಶಾಲೆಯಲ್ಲಿ ಶಾಸಕರಾದ ಕೆ.ಜಿ ಬೋಪಯ್ಯನವರು ಹಾಗು ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ವಿಠಲನಾಣಯ್ಯ ಚಲನಚಿತ್ರಕ್ಕೆ ಚಾಲನೆ ನೀಡಿದರು.
ಕುಟುಂಬದಲ್ಲಿ ಸೋಲುಗೆಲುವಿನ ನಡುವೆ ಎಷ್ಟೇ ಕಷ್ಟ ಬಂದರು ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕು ಗೊಳಿಸದೆ ವಿದ್ಯಾವಂತರಾಗಿ ಬದುಕು ಕಟ್ಟಿಕೊಳ್ಳುವ ಕಥೆ ಆಧಾರಿತ ಮಕ್ಕಳ ಚಲನ ಚಿತ್ರವಗಿದ್ದು ಕೊಡವ ಹಾಗು ಕನ್ನಡ ಭಾಷೆಯ ಬಳಕೆಯೊಂದಿಗೆ ಚಲನಚಿತ್ರವನ್ನು ತಯಾರಿಸಲಾಗುತಿದೆ.
ಹಲವು ಚಲನ ಚಿತ್ರಗಳನ್ನು ನಿರ್ದೇಶಿಸಿ ನಟಿಸಿರುವ ಕಲಾವಿದರಾದ ಕೊಟ್ಟ್‍ಕತ್ತಿರ ಪ್ರಕಾಶ್ ಕಾರ್ಯಪ್ಪ, ವಾಂಚಿರ ವಿಠಲ್ ನಾಣಯ್ಯ, ನೆರವಂಡ್ ಉಮೇಶ್, ತೇಲಪಂಡ ಪವನ್, ಚೆಡಿಯಂಡ ಸಂತೋಷ್ ಮೇದಪ್ಪ, ಬೊಳಿಯಾಡಿರ ದಕ್ಷಿತಾ, ಮುಕ್ಕಾಟಿರ ಗಗನ, ವಿನುತಾ, ತಾತಂಡÀ ಪ್ರಭಾ ನಾಣಯ್ಯ, ಅಡ್ಡಂಡ ಅನಿತಾ ಕಾರ್ಯಪ್ಪ, ಚೆರವೋಳಂಡ ಸುಜಾ ನಾಣಯ್ಯ,ಮಕ್ಕಳ ಪಾತ್ರದಲ್ಲಿ ವರುಣ್ ಗೌಡ ನಟಿಸಲಿದ್ದು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಬರೆದಿರುವ ಚಿತ್ರಕಥೆಗೆ ನಿರ್ಮಾಪಕ ಗಂಗಾಧರ್, ನಿರ್ದೇಶಕ ಸಲೇಮಾನ್.ಕೆ.ಜಾರ್ಜ್, ಛಾಯಾಗ್ರಹಣ ಪಿ.ಕೆ.ಎಚ್. ದಾಸ್ ಸ್ಕ್ರಿಪ್ಟರ್ ಗಯಾeóï ಕುಶಾಲ್ ಮಾಡಲಿದ್ದಾರೆ.
ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು 40 ಮಕ್ಕಳು ಭಾಗಿಯಾಗಿರುವ ಚಲನಚಿತ್ರದಲ್ಲಿ ವಿರಾಜಪೇಟೆ ಸಂಟೆಸ್ಸ್ ಶಾಲೆ,ಕಕ್ಕಬೆ,ಮಡಿಕೇರಿ ಸುತ್ತಲು ಶೂಟಿಂಗ್ ನಡೆಯಲಿದ್ದು ಜನವರಿಯಲ್ಲಿ ತೆರೆಗೆ ಬರಲಿದೆ.