ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಪುತ್ತೂರು ವಿಭಾಗ, ಮಡಿಕೇರಿ ಘಟಕದ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಮತ್ತು ಮಿನಿ ಬಸ್‍ಗಳನ್ನು
ಆಗಸ್ಟ್ 25 ರಿಂದ ಸಂಚಾರ ಮಾಡುತ್ತಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಡಳಿತ ಕೋರಿದೆ.
ಮಡಿಕೇರಿ-ಹಾಲೇರಿ-ಮಕ್ಕಂದೂರು-ಮಾದಾಪುರ-ಸೋಮವಾರಪೇಟೆ-ಬೆಂಗಳೂರಿಗೆ ಹೋಗುವ ಬಸ್ಸುಗಳನ್ನು ಮಡಿಕೇರಿ-ಸುಂಟಿಕೊಪ್ಪ-ಮಾದಾಪುರ-ಸೋಮವಾರಪೇಟೆ ಮೂಲಕ ಬೆಂಗಳೂರಿಗೆ ತೆರಳಬಹುದು.
ಮಡಿಕೇರಿಯಿಂದ ಮೇಕೇರಿ ಮೂಲಕ ವಿರಾಜಪೇಟೆ-ಬೆಂಗಳೂರಿಗೆ ಹೋಗುವ ವಾಹನಗಳನ್ನು ಮಡಿಕೇರಿ-ಚೆಟ್ಟಳ್ಳಿ-ಸಿದ್ದಾಪುರ-ಗೋಣಿಕೊಪ್ಪ ಮೂಲಕ ಮೈಸೂರು-ಬೆಂಗಳೂರಿಗೆ ಬಸ್ ಸಂಚರಿಸುತ್ತಿವೆ.
ಮಡಿಕೇರಿಯಿಂದ ಬೆಳಗ್ಗೆ 8 ಗಂಟೆಗೆ ಸುಂಟಿಕೊಪ್ಪ-ಮಾದಾಪುರ ಮಾರ್ಗವಾಗಿ ಸೋಮವಾರಪೇಟೆ ಮಾರ್ಗವಾಗಿ ಹೋಗಿ ಪುನಃ ಅದೇ ಮಾರ್ಗವಾಗಿ ಮಡಿಕೇರಿಗೆ ಬಂದು, ಪುನಃ ಮಧ್ಯಾಹ್ನ 3.30 ಗಂಟೆಗೆ ಮಡಿಕೇರಿಯಿಂದ ಅದೇ ಮಾರ್ಗವಾಗಿ ಸೋಮವಾರಪೇಟೆ ತಲುಪಿ ಕಿಕ್ಕರಳ್ಳಿ-ಸೂರ್ಲಬ್ಬಿ-ಗರ್ವಾಲೆಗೆ ತಲುಪಿ, ಗರ್ವಾಲೆಯಲ್ಲಿ ವಾಸ್ತವ್ಯ ಹೂಡಿ, ಪುನಃ ಬೆಳಗ್ಗೆ 7 ಗಂಟೆಗೆ ಅಲ್ಲಿಂದ ಹೊರಟು ಅದೇ ಮಾರ್ಗವಾಗಿ ಮಡಿಕೇರಿಗೆ ಸಂಚರಿಸುತ್ತಿದೆ.
ಮಡಿಕೇರಿ-ಸುಳ್ಯಕ್ಕೆ ಭಾಗಮಂಡಲ-ಕರಿಕೆ-ಪಾಣತ್ತೂರು-ಆಲೆಟ್ಟಿ ಮಾರ್ಗವಾಗಿ ಸುಳ್ಯಕ್ಕೆ ಕರ್ನಾಟಕ ಸಾರಿಗೆ ವಾಹನವನ್ನು ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ಯವರೆಗೆ ಪ್ರತಿ ಗಂಟೆಗೆ ಬಸ್ ಸಂಚರಿಸುತ್ತಿವೆ.
ಮಿನಿ ಬಸ್ಸುಗಳನ್ನು ಮಡಿಕೇರಿ-ಮೇಕೇರಿ ನಡುವೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7.30ರವರೆಗೆ ಪ್ರತಿ 15 ನಿಮಿಷಕ್ಕೊಮ್ಮೆ ಸಂಚರಿಸುತ್ತಿವೆ.
ಮಡಿಕೇರಿ-ಮಕ್ಕಂದೂರಿಗೆ 03 ಮಿನಿ ಬಸ್ಸುಗಳು ಬೆಳಗ್ಗೆ 8.30 ಗಂಟೆಗೆ, ಮಧ್ಯಾಹ್ನ 2 ಗಂಟೆಗೆ ಹಾಗೂ ಸಂಜೆ 4.15 ಗಂಟೆಗೆ ಬಸ್ ಸಂಚರಿಸುತ್ತಿವೆ.
ಭಾಗಮಂಡಲಕ್ಕೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗ್ಗೆ 7 ಗಂಟೆಗೆ ಅಯ್ಯಂಗೇರಿ-ಬಲ್ಲಮಾವಟಿ-ಪೇರೂರು-ನಾಪೋಕ್ಲು-ಹೊದ್ದೂರು-ಮೂರ್ನಾಡು ಮಾರ್ಗವಾಗಿ ಮಡಿಕೇರಿಗೆ ಬಸ್ ಸಂಚಾರ ಮಾಡಿ, ಪುನಃ ಅದೇ ಮಾರ್ಗವಾಗಿ ಸಂಜೆ 4.30ಕ್ಕೆ (ಶಾಲಾ ಮಕ್ಕಳ ಅನುಕೂಲಕ್ಕಾಗಿ) ಮಡಿಕೇರಿಯಿಂದ ಭಾಗಮಂಡಲಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಮಡಿಕೇರಿ-ಕಾಟಕೇರಿಗೆ 03 ಮಿನಿ ಬಸ್ಸುಗಳು ಬೆಳಗ್ಗೆ 8.30 ಗಂಟೆಗೆ, ಅಪರಾಹ್ನ 2 ಗಂಟೆಗೆ ಹಾಗೂ ಸಂಜೆ 4.15 ಗಂಟೆಗೆ ವ್ಯವಸ್ಥೆ ಮಾಡಲಾಗಿದೆ.
ಮಡಿಕೇರಿಯಿಂದ ಸುಂಟಿಕೊಪ್ಪ-ಗರಗಂದೂರು ಮಾರ್ಗವಾಗಿ ಮಾದಾಪುರಕ್ಕೆ ಬೆಳಗ್ಗೆ 8 ಗಂಟೆಯಿಂದ (ಶಾಲಾ ಮಕ್ಕಳ ಅನುಕೂಲಕ್ಕಾಗಿ) ಸಂಜೆ 4 ಗಂಟೆಗೆ ಅದೇ ಮಾರ್ಗವಾಗಿ ಬಸ್ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ.