ಕೋಟಬೇಟ್ಟ ಮತ್ತು ಪುಷ್ಪಗೀರಿಘಟ್ಟ ಪ್ರದೇಶದಲ್ಲಿ ಬರೆಗಳು,ಬೆಟ್ಟಗುಡ್ಡಗಳು ನೆಲಕ್ಕೆ ಉರುಳುತ್ತಿದೆ.

ಮಾದಾಪುರ, ಮುವತೋಕ್ಲು, ಶಿರಂಗಳ್ಳಿ, ಗರ್ವಾಲೆ, ಸೂರ್ಲಬ್ಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯ, ಹಮ್ಮೀಯಾಲ, ಮುಟ್ಲು, ತಾಕೇರಿ, ಶಾಂತಳ್ಳಿ, ಕುಡಿಗಾಣ, ಕೊತ್ನಳ್ಳಿ ಈ ಭಾಗದಲ್ಲಿ ಬೆಟ್ಟಗುಡ್ಡಗಳು ಕುಸಿಯುವ ಅತಂಕ ಸೃಷ್ಠಿಯಾಗಿದ್ದು ಕೂಡಲೇ ಜಿಲ್ಲಾಡಳಿತ ಮುನ್ನಚರಿಕೆ ಕ್ರಮ ವಹಿಸಬೇಕಾಗಿ ವಿನಂತಿ.
ಗರ್ವಾಲೆ ಗ್ರಾಮದ ಹತ್ತಿರ ನಾಲ್ಕು ಎಕರೆ ಭಾಗ ನೆಲಕ್ಕೂರುಳಿದ್ದು, ಶೀರಂಗಳ್ಳಿ ಗ್ರಾಮದಲ್ಲಿ ಈಗ ತಾನೇ ಎರಡು ಕಿಲೋ ಮೀಟರ್ ನಷ್ಟು ರಸ್ತೆ ಸಮೆತ ತಗ್ಗು ಪ್ರದೇಶಕ್ಕೆ ಬೆಟ್ಟದಿಂದ ಕಲ್ಲು,ಮಣ್ಣು,ಮರಗಿಡಗಳೊಂದಿಗೆ ಕಂದಕ ಬಿದ್ದಿದ್ದು ಗರ್ವಾಲೆ ಪಂಚಾಯ್ತಿ ವ್ಯಾಪ್ತಿಯ ಹತ್ತಾರು ಗ್ರಾಮಗಳು ಯಾವ ಭಾಗಕ್ಕೂ ತೆರಳಲಾಗದೆ ಗ್ರಾಮದೊಳಗೆ ಇದ್ದು ಶೇಕಡಾ 10 ರಷ್ಟು ಜನ ಪಟಣ್ಣದ ಕಡೆ ವಲಸೆ ಹೊಗಿದ್ದು ಈಗ ಶೇಕಡಾ 90 ರಷ್ಟು ಜನ ಸಂಕಷ್ಟದಲ್ಲಿ ಇರುವ ಜನತೆ ಯಾವುದೆ ದಾರಿಯಲ್ಲದೆ ದಿಕ್ಕು ತೋಚದಂತಾಗಿದೆ.ಕೂಡಲೇ ಸಂಬಂಧಪಟ್ಟ ನಮ್ಮ ಗ್ರಾಮದತ್ತ ಗಮನಹರಿಸಿ ಪ್ಲೀಸ್….
ಕೊಡಗನ್ನು ಉಳಿಸಿ ಪ್ಲೀಸ್….