ಅ.10 ರಂದು ಸಾರ್ವಜನಿಕ ಸಂಪರ್ಕ ಸಭೆ
******************************
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಭಾರತ ಸರ್ಕಾರದ ಅನುಮೋದನೆಗೆ ಅನುಗುಣವಾಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೈಸೂರಿನಿಂದ ಮಡಿಕೇರಿಯವರೆಗೆ ಪ್ರಸ್ತಾವಿತ 4 ಪಥಗಳ ಹೆದ್ದಾರಿ ನಿರ್ಮಾಣಕ್ಕಾಗಿ ಸಾರ್ವಜನಿಕರ ತಿಳುವಳಿಕೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲು ಕೊಡಗು ಜಿಲ್ಲೆಯ ಜಿಲ್ಲಾಡಳಿತದ ಮುಂದಾಳತ್ವದೊಂದಿಗೆ ಕುಶಾಲನಗರದ ರೈತ ಸಭಾಂಗಣದಲ್ಲಿ ಅಕ್ಟೋಬರ್ 10 ರಂದು ಬೆಳಗ್ಗೆ 10.30 ಗಂಟೆಗೆ ಸಾರ್ವಜನಿಕ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ.
ಮೈಸೂರು ಜಿಲ್ಲೆಯ ಸಾರ್ವಜನಿಕರು ಹಿಂದೆ ಮೈಸೂರಿನಲ್ಲಿ ನಡೆದ ಸಭೆಯನ್ನು ತಪ್ಪಿದ್ದಲ್ಲಿ ಅವರು ಕೂಡ ಕೊಡಗು ಜಿಲ್ಲೆಯ ಸಾರ್ವಜನಿಕರ ಜೊತೆಗೂಡಿ ಈ ಸಭೆಯಲ್ಲಿ ಭಾಗವಹಿಸಬಹುದು ಮತ್ತು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಸಲ್ಲಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕರು ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.